Home
ಕೆರೂರ ನಗರ ಸ್ಥಳಿಯ ಸಂಸ್ಥೆಯು 1973 ರಲ್ಲಿ ಸ್ಥಾಪನೆಯಾಯಿತು. ಕೆರೂರ ಪಟ್ಟಣವು ಬಾಗಲಕೋಟೆಯಿಂದ 32 ಕಿ.ಮೀ. ದೂರದಲ್ಲಿದೆ ಮತ್ತು ರಾಷ್ಟ್ರೀಯ ಹೆದ್ದಾರಿ-218 ರಲ್ಲಿ ಸ್ಥಿತವಾಗಿದೆ ಹಾಗೂ ಬಾದಾಮಿಯು 22 ಕಿ.ಮೀ ದೂರದಲ್ಲಿದೆ. ಪಟ್ಟಣದ ಜನಸಂಖ್ಯಾ 2011 ರ ಸಮೀಕ್ಷೆಯಂತೆ 19,728. ಪಟ್ಟಣದಲ್ಲಿ 16-ವಾರ್ಡಗಳಿದ್ದು ಅಷ್ಟೇ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳಿರುತ್ತಾರೆ ಬಾಗಲಕೋಟ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ
ಪಟ್ಟಣವು ಹೋಬಳಿ ಮಟ್ಟದಲ್ಲಿರುತ್ತದೆ. ಕೆರೂರ ಪಟ್ಟಣವು ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದ್ದು ಪ್ರಸಿದ್ದ ಸಾಹಿತಿಗಳಲ್ಲಿ ಒಬ್ಬರಾದ ಕೆರೂರವಾಸುದೇವಾಚಾರ್ಯರು ಜನಿಸಿದ ಪ್ರದೇಶವಾಗಿದೆ. ಕನ್ನಡದ ನವೋದಯದ ಮೊದಮೊದಲ ಸಾಹಿತಿಗಳಲ್ಲಿ ಇವರೊಬ್ಬರು. ಕಾದಂಬರಿ ಅಲ್ಲದೆ ನಾಟಕಗಳನ್ನೂ ಸಹ ಅನುವಾದಿಸಿ, ಬರೆದು, ರಂಗದ ಮೇಲೆ ಆಡಿಸಿದ್ದಾರೆ ವಾಸುದೇವಾಚಾರ್ಯರು ನಿರ್ಮಿಸಿದ ಹನುಮನ ದೇವಾಲಯವು ಸಾಕಷ್ಟು ಇತಿಹಾಸವುಳ್ಳ ದೇವಸ್ಥಾನದಲ್ಲಿ ಒಂದಾಗಿದೆ ಹಾಗೂ ಶ್ರೀ ರಾಚೂಟೇಶ್ವರ ಮತ್ತು ಶ್ರಿ ಬನಶಂಕರಿ ದೇವಾಲಯ ಪುರಾತನ ಕಾಲದಿಂದಲೂ ಇದ್ದು ಪ್ರತಿ ವರ್ಷ ಜಾತ್ರೆ ನಡೆಯುತ್ತದೆ.
ಪಟ್ಟಣ ಪಂಚಾಯತ್ ಧ್ಯೇಯೋದ್ಧೇಶಗಳು: ಪ.ಪಂ. ವ್ಯಾಪ್ತಿಯೊಳಗಿನ ಎಲ್ಲಾ ಕುಟುಂಬಗಳಿಗೆ ಕುಡಿಯುವ ನೀರಿನ ಸರಬರಾಜು, ಸರಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸುವುದು, ಪ.ಪಂ.ನ ವ್ಯಾಪ್ತಿಯೊಳಗಿನ ಎಲ್ಲಾ ದಾರಿಗಳಿಗೆ ದಾರಿದೀಪದ ಅಳವಡಿಕೆ, ಉತ್ತಮ ರೀತಿಯ ಕಸ ಸಂಗ್ರಹಣೆ ಮತ್ತು ವಿಲೇವಾರಿ ಮಾಡಿ ನಗರವನ್ನು ಸುಂದರವಾಗಿಡುವುದು. ಉತ್ತಮ ರೀತಿಯ ರಸ್ತೆ, ಚರಂಡಿಯನ್ನು ಒದಗಿಸಿ ಸಾರಿಗೆ ವ್ಯವಸ್ಥೆಯನ್ನು ಸುಗಮವಾಗಿಸುವುದು. ಕೆ.ಎಂ.ಆರ್.ಪಿ. ಯೋಜನೆಯಡಿ ಸುಧಾರಣೆಗೊಳ್ಳುತ್ತಿರುವ ಗಣಕೀಕರಣ ಯೋಜನೆಗಳಾದ ಜನನ-ಮರಣ ನೋಂದಣಿ, ದೂರು ನಿವಾರಣಾ ಘಟಕ, ವೆಬ್‌ಸೈಟ್, ಗಣಕೀಕೃತ ಆಸ್ತಿ ತೆರಿಗೆ ಯೋಜನೆಯ ಮೂಲಕ ಜನರಿಗೆ ಉತ್ತಮ ಸೇವೆಯನ್ನು ಒದಗಿಸುವುದು
ಗಣಕೀಕರಣ : ಕೆರೂರ ಪಟ್ಟಣದ 1990 ನೇ ಸಾಲಿನಿಂದ ಇಲ್ಲಿಯವರೆಗಿನ ಜನನ ಮತ್ತು ಮರಣ ದಾಖಲೆಗಳನ್ನು ಗಣಕೀಕೃತಗೊಳಿಸಲಾಗಿದ್ದು, ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ ಅಲ್ಲದೇ ಸಾರ್ವಜನಿಕ ಕುಂದುಕೊರತೆ ವಿಭಾಗವನ್ನು ಪ್ರಾರಂಭಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಕೆರೂರ ಪಟ್ಟಣದ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಲು ಅವಕಾಶ ಮಾಡಲಾಗುವುದು. ಸಾರ್ವಜನಿಕರ ತಮ್ಮ ಕುಂದು ಕೊರತೆ(ದೂರು)ಗಳನ್ನು ಸಾರ್ವಜನಿಕ ಕುಂದು ಕೋರತೆಗಳ ನಿವಾರಣಾ ಘಟಕದಲ್ಲಿ ಸಲಲ್ಲಿಸಬಹುದು ಅಥವಾ ಆನ್‌ಲೈನ್ ಮೂಲಕ ಸಲ್ಲಿಸಬಹುದು ಅಥವಾ ದೂರವಾಣಿ(ದೂ.ಸಂ: 230038)ಯ ಮುಖಾಂತರವು ಸಲ್ಲಿಸಬಹುದು.
Location And Connectivity
The town is situated at 16-01′North and 75-34 East. It has an average elevation of 617 metres (2024 feet) above MSL.The town is in Badami Taluk and is in Bagalkot district. Bagalkot town is located North of Kerur. Bijapur is located at a distance of 96 kilometers. The nearest railway station is at Badami, about 20 kilometers from Kerur. Kerur is located at a distance of 500 kilometers from state capital of Bangalore. As per 2011 Census the Population of Kerur Town is 19,728 and in that Males Population is 9,948 and Females are 9,780. The Male literates are 7,132 and the Female literates are 5,507 as per 2011 Census.
The National Highway-218 which connects Hubli-solapur passes through the town. The town is at a distance of 32 kilometers from Bagalkot which has been made into district headquarters. Kerur is located at a distance of 20 kilometers from world famous cave temples of Badami. Badami is a great place of tourist attraction. Badami taluk is surrounded in North by Bagalkot Taluk, North West by Mudhol, East by Hungund and Kustagi of Raichur district, west by Ramdurg of Belgaum district, South by Nargund & Ron of Dharwar Disrtict. The taluk has 3 major towns of Badami, Kerur and Guledgudda and 150 villages. The taluk has an area of 1406 square kilometers.
History and Regional Importance
The town panchayt was formed in the year 1973. Badami which is 20 kilometers away from Kerur was the ancient capital of Chalukya Pulakeshi in 543 A.D. They ruled it until 753 A.D. the place is known for its wonderful rock cut shrines of vedic traditions. The fort was renovated by Hyder Ali. Tippu Sultan built a fine mosque at Badami. The first rock cut shrine has 18 armed Nagaraja to its right at the outset engaged in Tandava dancing. A remarkable a figure on ceiling of one of the caves is Nagaraj and Vidhyabhara couple. Figures of funny kubjas or dwarfs are seen in a veriety of poses. There are more than life size Bhrahma and Trivikrama figures. The third cave is the most important and is called the Vaishnava cave. Figures of ParaVasudeva seated on coiled serpent Bhoovaraha, Narasimha & Harihara all engraved in vigorous style, and are taller than life size figures. The cave at top is Jaina, full of figures of Thirthankaras, Yakshas and Yakshis. The Gommata figure here has long locks. The “upper Shivalaya” on the rocky fort has been identified as an earlier Vaishnava temple, “Malegithi Shivalaya” as of Surya & lower Shivalaya as of Ganapati. The Jambulinga which is a triple shrine housing Brahma, Vishnu & Shiva is another important monument of the place. Queen Vinayavathi built it in 699 A.D. There is a huge pond called Agastya Thirtha. The rock cut shrines are engraved in hard sandstone and the figures here are of unrivalled beauty. There are also bracket firures with secular scences on the pillars in the rock cut shrines.
This Page is Maintained By: Shri R F Siddanakolla Chief Officer Last Updated On: 06-02-2012

